2019-20ನೇ ಸಾಲಿನ ಶಾಲಾ ಶೈಕ್ಷಣಿಕ ಚಟುವಟಿಕೆಗಳ ಸಂಕ್ಷಿಪ್ತ ನೋಟ
ಸರ್ಕಾರಿ ಹಿ.ಪ್ರಾ.ಮತ್ತು ಪ್ರೌಢಶಾಲೆ-ಅತ್ತಿಗೋಡು ಹತ್ತಿ (ರ) ನೋಡು
"ಗುಣಮಟ್ಟದ ಶಿಕ್ಷಣದೊಂದಿಗೆ ಉತ್ತಮ ನಾಗರಿಕತ್ವ ತರಬೇತಿ ನಮ್ಮ ಗುರಿ"
Thursday 21 December 2017
ಒಂದು ದಿನದ ಶಾಲಾ ಶೈಕ್ಷಣಿಕ ಪ್ರವಾಸ 21.12.2017
ದಿನಾಂಕ 21.12.2017 ರಂದು ಒಂದು ದಿನದ ಶಾಲಾ ಶೈಕ್ಷಣಿಕ ಪ್ರವಾಸ ಹಮ್ಮಿಕೊಳ್ಳಲಾಗಿತ್ತು ಒಟ್ಟು 60 ಮಕ್ಕಳು ಮತ್ತು 5 ಜನ ಶಿಕ್ಷಕರು ಭಾಗವಹಿಸಿದ್ದರು. ಶ್ರೀರಂಗಪಟ್ಟಣ, GRS FANTASY PARK, ಕೆ.ಆರ್.ಎಸ್. ಮುಂತಾದವುಗಳ ಸ್ಥಳ ಭೇಟಿ ಮಾಡಲಾಯಿತು.
ಉಸ್ತುವಾರಿ ಶಿಕ್ಷಕರು: ಶ್ರೀ ಪ್ರಸನ್ನಕುಮಾರ ದೈ.ಶಿ.ಶಿ., ಶ್ರೀ ಸ್ವಾಮಿ ಸಿ.ಹೆಚ್. ಮತ್ತು ಶ್ರೀ ಅರುಣ ಎಂ.ಎನ್.
ಅಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ 05.12.2017
ದಿನಾಂಕ 05.12.2017 ರಂದು ಡಾ.ರಾಜೇಶ್ ವೈದ್ಯಾಧಿಕಾರಿಗಳು ಹೆರಿಗೆ ಆಸ್ಪತ್ರೆ ಅತ್ತಿಗೋಡು ಇವರು ಮಕ್ಕಳಲ್ಲಿ ಅಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು ಮೂಡಿಸುವ ದೃಷ್ಟಿಯಿಂದ ಉಪನ್ಯಾಸ ನೀಡಿದರು. ಈ ಸಂಬಂಧ ಆರೋಗ್ಯ ಇಲಾಖೆಯಿಂದ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ನಡೆಸಿ ಮೂರು ಬಹುಮಾನಗಳನ್ನು ನೀಡಿದರು. ಪ್ರಥಮ ಬಹುಮಾನ 10ನೇ ತರಗತಿ ವಿದ್ಯಾರ್ಥಿನಿ ರೋಜ ಟಿ.ಸಿ. ಪಡೆದುಕೊಂಡಳು.
ಕಿರಿಯ ಆರೋಗ್ಯ ಸಹಾಯಕರಾದ ಬಿ.ಎಲ್.ಉಷಾ, ಸುಚಿತ್ರಾ ಮತ್ತು ರವಿ ಡಿ. ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಟ್ಟರು.
Subscribe to:
Posts (Atom)