Friday 23 June 2017

"ಅಂತರರಾಷ್ಟ್ರೀಯ ಯೋಗ ದಿನಾಚರಣೆ"

(INTERNATIONAL DAY OF YOGA)

21.06.2017

ಶಾಲಾ ಆವರಣದಲ್ಲಿ "ವಿಶ್ವ ಯೋಗ ದಿನಾಚರಣೆ" ಅಂಗವಾಗಿ ಶಿಕ್ಷಕರೊಂದಿಗೆ ಮಕ್ಕಳಿಂದ ವಿವಿಧ ಯೋಗಾಸನಗಳನ್ನು ಮಾಡಿಸಲಾಯಿತು ಹಾಗೂ ಮುಖ್ಯ ಶಿಕ್ಷಕರಾದ ಶ್ರೀ ನಾಗಶೆಟ್ಟಿ ರವರು "ಯೋಗ"ದ ಮಹತ್ವವನ್ನು ವೇದಿಕೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಎಲ್ಲ ಶಿಕ್ಷಕರು ಭಾಗವಹಿಸಿದ್ದರು. 

 

1 ರಿಂದ 10ನೇ ತರಗತಿಯವರೆಗಿನ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರಾಣಾಯಾಮದಲ್ಲಿ ನಿರತರಾಗಿರುವುದು


1 ರಿಂದ 10ನೇ ತರಗತಿಯವರೆಗಿನ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪದ್ಮಾಸನದಲ್ಲಿ ಕುಳಿತು ಧ್ಯಾನ ಮಾಡುತ್ತಿರುವುದು


ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಪ್ರಸನ್ನಕುಮಾರ ರವರೊಂದಿಗೆ ಮಕ್ಕಳು ಸೂರ್ಯ ನಮಸ್ಕಾರ ಮಾಡುವ ವಿಧಾನ ಕಲಿಯುತ್ತಿರುವುದು



 

Wednesday 7 June 2017

"ವಿಶ್ವ ಪರಿಸರ ದಿನಾಚರಣೆ" (WORLD ENVIRONMENT DAY PROGRAMME)

ದಿನಾಂಕ 05.06.2017 ರಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪ್ರೌಢಶಾಲಾ ಮುಖ್ಯ ಶಿಕ್ಷಕರು, ಪ್ರಾಥಮಿಕ ಶಾಲಾ ಪ್ರಭಾರಿ ಮುಖ್ಯ ಶಿಕ್ಷಕರು, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಯಾದ ಶ್ರೀ ಹರೀಶ್ ರವರು ಹಾಗೂ ಶಾಲಾ ಶಿಕ್ಷಕ ಬಳಗದವರು ಅತ್ತಿಗೋಡು ಹೆರಿಗೆ ಆಸ್ಪತ್ರೆಯ ಆವರಣದಲ್ಲಿ ಗಿಡ ನೆಟ್ಟು ಸಂಭ್ರಮಿಸಿದ ಕ್ಷಣ............  
 



 "ಹಸಿರೇ ಉಸಿರು, ಹಸಿರಿದ್ದರೆ ನಿಟ್ಟುಸಿರು"

 
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ "ಭುವನ ಇಕೋ ಕ್ಲಬ್" ವತಿಯಿಂದ ವಿಜ್ಞಾನ ಶಿಕ್ಷಕಿ ಶ್ರೀಮತಿ ಸುನೀತಾ ಕೆ.ಪಿ. ಅವರ ನೇತೃತ್ವದಲ್ಲಿ ಇಕೋ ಕ್ಲಬ್ ಸದಸ್ಯರಿಂದ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡು ಪರಿಸರ ಕಾಳಜಿ ಕುರಿತು ಜಾಗೃತಿ ಮೂಡಿಸಲಾಯಿತು. ............

"ಪರಿಸರ ಜಾಗೃತಿ ಕುರಿತು ಶಾಲಾ ಮಕ್ಕಳಿಗೆ ವೀಡಿಯೋ ಪ್ರಸ್ತುತಿ"


ಶಾಲಾ ತರಗತಿ ಕೊಠಡಿಯಲ್ಲಿ ಮಕ್ಕಳಿಗೆ ಪರಿಸರ ಜಾಗೃತಿ ಕುರಿತು ವಿಜ್ಞಾನ ಶಿಕ್ಷಕಿ ಶ್ರೀಮತಿ ಸುನೀತಾ ಕೆ.ಪಿ. ಅವರಿಂದ ಆಧುನಿಕ ಎಲ್.ಇ.ಡಿ. ಪ್ರೊಜೆಕ್ಟರ್ ನಿಂದ ವೀಡಿಯೋ ಪ್ರಸ್ತುತಿ.


ಶಾಲಾ ಪ್ರಾರಂಭೋತ್ಸವ (SCHOOL REOPENING DAY)

 ಶಾಲಾ ಪ್ರಾರಂಭೋತ್ಸವದಂದು ದಾಖಲಾತಿ ಆಂದೋಲನ ನಿಮಿತ್ತ ಮಕ್ಕಳ ಜಾಥಾ ನಡೆಸಲಾಯಿತು
ಬೆಳಿಗ್ಗೆ :10.30ಕ್ಕೆ

ಶಾಲಾ ಪ್ರಾರಂಭೋತ್ಸವದಂದು ಶಾಲೆಗೆ ಹಾಜರಾದ ಮಕ್ಕಳೊಂದಿಗೆ ಒಂದು ಕ್ಷಣ....... ಭಾವಚಿತ್ರಕ್ಕಾಗಿ.....
ಬೆಳಿಗ್ಗೆ: 11.30ಕ್ಕೆ

ಶಾಲಾ ಪ್ರಾರಂಭೋತ್ಸವದಂದು ಶಾಲೆಗೆ ಹಾಜರಾದ ಮಕ್ಕಳಿಗೆ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಶ್ರೀ ನಾಗಶೆಟ್ಟಿ ಮತ್ತು ಪ್ರಾಥಮಿಕ  ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕರಾದ ಶ್ರೀ ಅರುಣ ಎಂ.ಎನ್. ರವರಿಂದ ಶಿಕ್ಷಕರ ಸಮ್ಮುಖದಲ್ಲಿ ಉಚಿತ ಪಠ್ಯಪುಸ್ತಕ, ಸಮವಸ್ತ್ರ ವಿತರಣೆ ಮಾಡಲಾಯಿತು.