Friday 23 June 2017

"ಅಂತರರಾಷ್ಟ್ರೀಯ ಯೋಗ ದಿನಾಚರಣೆ"

(INTERNATIONAL DAY OF YOGA)

21.06.2017

ಶಾಲಾ ಆವರಣದಲ್ಲಿ "ವಿಶ್ವ ಯೋಗ ದಿನಾಚರಣೆ" ಅಂಗವಾಗಿ ಶಿಕ್ಷಕರೊಂದಿಗೆ ಮಕ್ಕಳಿಂದ ವಿವಿಧ ಯೋಗಾಸನಗಳನ್ನು ಮಾಡಿಸಲಾಯಿತು ಹಾಗೂ ಮುಖ್ಯ ಶಿಕ್ಷಕರಾದ ಶ್ರೀ ನಾಗಶೆಟ್ಟಿ ರವರು "ಯೋಗ"ದ ಮಹತ್ವವನ್ನು ವೇದಿಕೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಎಲ್ಲ ಶಿಕ್ಷಕರು ಭಾಗವಹಿಸಿದ್ದರು. 

 

1 ರಿಂದ 10ನೇ ತರಗತಿಯವರೆಗಿನ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರಾಣಾಯಾಮದಲ್ಲಿ ನಿರತರಾಗಿರುವುದು


1 ರಿಂದ 10ನೇ ತರಗತಿಯವರೆಗಿನ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪದ್ಮಾಸನದಲ್ಲಿ ಕುಳಿತು ಧ್ಯಾನ ಮಾಡುತ್ತಿರುವುದು


ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಪ್ರಸನ್ನಕುಮಾರ ರವರೊಂದಿಗೆ ಮಕ್ಕಳು ಸೂರ್ಯ ನಮಸ್ಕಾರ ಮಾಡುವ ವಿಧಾನ ಕಲಿಯುತ್ತಿರುವುದು



 

2 comments:

  1. ತುಂಬಾ ವ್ಯವಸ್ಥಿತವಾಗಿ ಕಾರ್ಯಕ್ರಮ ನಡೆದಿರುವುದನ್ನು ಫೋಟೋಗಳೇ ಹೇಳುತ್ತಿವೆ. ಇದು ಎಲ್ಲಾ ಶಾಲೆಗಳ ಶಿಕ್ಷಕರುಗಳು ಹಾಗೂ ಮುಖ್ಯಶಿಕ್ಷಕರುಗಳಿಗೆ ಪ್ರೇರೇಪಿಸುವಂತಿದೆ. ತಮ್ಮ ಮುಂದಾಳತ್ವದಲ್ಲಿ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿದ ತಮಗೂ, ತಮ್ಮ ಶಾಲೆಯ ಎಲ್ಲಾ ಕ್ರಿಯಾಶೀಲ ಶಿಕ್ಷಕ ವರ್ಗಕ್ಕೂ, ಎಲ್ಲಕ್ಕಿಂತ ಮುಖ್ಯವಾಗಿ ಸಕ್ರಿಯವಾಗಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಅಭಿನಂದನೆಗಳು.
    -ಸೋಮಶೇಖರ ಹೆಚ್.ಎಸ್. ಸಶಿ, ಸ.ಪ್ರೌ.ಶಾಲೆ, ಹುಣಸವಾಡಿ

    ReplyDelete
  2. ತಮ್ಮ ಪ್ರೋತ್ಸಾಹ ಹೀಗೆ ಮುಂದುವರೆಯಲಿ .ಸಲಹೆ ನೀಡಿ ನಮ್ಮನ್ನ ಬೆಳೆಸಿ

    ReplyDelete